ಕೇರಿಂಗ್ ವಿಥ್ ಕಲರ್ ತಂಡದಿಂದ ಎಲ್ಲರಿಗೂ ಶುಭಾಶಯಗಳು!

2017ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸಬೇಕೆಂಬ ಒಂದು ಮೂಲ ಆಶಯದಿಂದ ಪ್ರಾರಂಭವಾಗಿ, 2021 ರಲ್ಲಿ 3000ಕ್ಕೂ ಅಧಿಕ ಶಾಲೆ ಮತ್ತು 3 ಶೈಕ್ಷಣಿಕ ಜಿಲ್ಲೆಗಳೊಡನೆ ಸಹಭಾಗಿ ಪಯಣದಲ್ಲಿ ನಮ್ಮ ಸಂಸ್ಥೆ ಅದ್ಭುತವಾದ ಮೈಲುಗಲ್ಲುಗಳನ್ನು ಸಾಧಿಸಿದೆ. 
ನಮ್ಮ ನಾಲ್ಕು ವರ್ಷಗಳ ರೋಚಕ ಪಯಣದಲ್ಲಿ ನಾವೀನ್ಯತೆಯ ಹಾಗೂ ತಳಹಂತದ ನಾಯಕತ್ವ ಕಥನಗಳಿಂದ ಮತ್ತು ಅವುಗಳ  ಯಶಸ್ಸಿನಿಂದ ನಮ್ಮ ಹೃದಯದಲ್ಲಿ  ಸಂಭ್ರಮ ಮನೆಮಾಡಿದೆ. ಇದರೊಂದಿಗೆ ಅಗಾಧ ಅನುಭವಗಳನ್ನು ನೀಡಿದ ವೈಫಲ್ಯಗಳನ್ನೂ  ಅಷ್ಟೇ ಸಂಭ್ರಮದಿಂದ ದಾಖಲಿಸಿದ್ದೇವೆ.  ದೇಶದ ಪ್ರತಿಯೊಂದು ವರ್ಗ ಕೋಣೆಯಲ್ಲೂ ಅನುಭವಾತ್ಮಕ ಕಲಿಕೆಯನ್ನು ಅನುಷ್ಠಾನಗೊಳಿಸಬೇಕೆಂಬ ನಮ್ಮ ಆಶಯದಲ್ಲಿ ನಂಬಿಕೆಯಿರಿಸಿರಿವ ಪ್ರತೀ ಭಾಗಿದಾರರ ಬೆಂಬಲದಿಂದ ಹಾಗೂ ಜ್ಞಾನದಿಂದ ನಾವು ಸಾಕಷ್ಟು ಅನುಭವವನ್ನು ಪಡೆದಿದ್ದೇವೆ.    ದೇಶದ ಪ್ರತಿಯೊಂದು ಶಾಲಾ ಕೊಠಡಿಗಳಲ್ಲಿ ಅನುಭವಾತ್ಮಕ ಕಲಿಕೆಯನ್ನು ಅನುಷ್ಠಾನಗೊಳಿಸಬೇಕೆಂಬ ನಮ್ಮ ಆಶಯದಲ್ಲಿ ನಂಬಿಕೆಯಿರಿಸಿಕೊಂಡ ಎಲ್ಲಾ ಭಾಗಿದಾರರ ಬೆಂಬಲದಿಂದ ಹಾಗೂ ಜ್ಞಾನದಿಂದ ನಾವು ಸಾಕಷ್ಟುಅನುಭವ ಗಳಿಸಿದ್ದೇವೆ.   
ಸರ್ಕಾರಿ ಶಾಲಾ ವ್ಯವಸ್ಥೆಯೊಂದಿಗೆ ನಮ್ಮ ಕೆಲಸವು ಐದನೇ ವರ್ಷಕ್ಕೆ ಕಾಲಿರಿಸುತ್ತಿದ್ದು, ನಾವು ಮಾಡುತ್ತಿರುವ ಕೆಲಸಗಳ ಕಥನಗಳನ್ನು ಹಾಗೂ ಈ ಕ್ಷೇತ್ರದಲ್ಲಿನ ನಮ್ಮ ಅನುಭವಗಳ ಒಳನೋಟಗಳನ್ನು ನಮ್ಮ ತ್ರೈಮಾಸಿಕ ವಾರ್ತಾಪತ್ರ “ಅವರ್  ಇಂಪ್ರಿಂಟ್‌”ನಲ್ಲಿ ಹಂಚಿಕೊಳ್ಳಲು ಇಚ್ಛಿಸುತ್ತೇವೆ.
“ಅವರ್  ಇಂಪ್ರಿಂಟ್‌”ನ ಮೊದಲ ಆವೃತ್ತಿಯಲ್ಲಿ ದೇಶದ ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಕೋವಿಡ್-19 ಸೋಂಕು ಸೃಷ್ಟಿಸಿದ ಕೆಲವು ಸವಾಲುಗಳನ್ನು ಬಗೆಹರಿಸಲು ನಾವು ನಡೆಸಿದ ಪ್ರಯತ್ನಗಳ ಕಿರುನೋಟವನ್ನು ನೀಡುತ್ತಿದ್ದೇವೆ.

ಸಂತಸಕರವಾಗಿ ಓದಿ ಆನಂದಿಸಿ!

ಕಾರ್ಯಕ್ಷೇತ್ರದಿಂದ ಧ್ವನಿಗಳು

ಕೋವಿಡ್ – 19 ಸಮಯದಲ್ಲಿ ಶಾಲಾ ಶಿಕ್ಷಣ ಸ್ಥಗಿತಗೊಂಡಾಗ ಶಿಕ್ಷಕರ ವೃತ್ತಿಪರ ಪ್ರಗತಿ ಕಾರ್ಯಕ್ರಮಗಳ ಕಾರ್ಯಾರಂಭಕ್ಕೆ ತುಮಕೂರು ಜಿಲ್ಲೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ(ಡಯಟ್) ಪ್ರಾಂಶುಪಾಲರಾದ ಶ್ರೀಯುತ ಮಂಜುನಾಥ್ ಅವರು ಪ್ರಮುಖ ಕಾರಣಕರ್ತರು. ಕೇರಿಂಗ್ ವಿಥ್ ಕಲರ್, ಡಯಟ್ ತುಮಕೂರು ಜೊತೆಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಯೋಗವನ್ನು ಹೊಂದಿತ್ತು. ಶ್ರೀ ಮಂಜುನಾಥರವರು, ಈ ನಾವಿನ್ಯ ತರಬೇತಿ ಕಾರ್ಯಕ್ರಮಗಳ ಆದ್ಯ ಪ್ರವರ್ತಕರಾಗಿ ತಮ್ಮ ಅನುಭವಗಳನ್ನು ಹಾಗೂ, ಕೋವಿಡ್ ನಂತರದ ಕಾಲದಲ್ಲಿ ಶಾಲೆಗಳನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ ಭವಿಷ್ಯದ ಯೋಜನೆಗಳ ಬಗ್ಗೆ ಒಳನೋಟಗಳನ್ನು ಹಂಚಿಕೊಂಡಿದ್ದಾರೆ. 
ವಿಡಿಯೋ ವೀಕ್ಷಿಸಿ
     ಕೋವಿಡ್-19 ಸಂದರ್ಭದಲ್ಲಿನ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮಗಳು

2020-21 ರಲ್ಲಿ ಕೋವಿಡ್ 19ರಿಂದಾಗಿ ಕಲಿಕಾ ಪ್ರಕ್ರಿಯೆಗಳು ಹಠಾತ್ತನೆ ಸ್ಥಗಿತಗೊಂಡವು. ಈ ಶಿಕ್ಷಣ ವ್ಯವಸ್ಥೆಯ ಇಬ್ಬರು ಪ್ರಮುಖ ಭಾಗಿದಾರರಾದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನೆರವಿಗಾಗಿ ಕೇರಿಂಗ್ ವಿಥ್ ಕಲರ್ ಸಂಸ್ಥೆಯು ನಾವಿನ್ಯವಾದ ವಿಷಯ ವಸ್ತುಗಳನ್ನು ಹಾಗೂ ವೈವಿದ್ಯಮಯ ಕಾರ್ಯಕ್ರಮಗಳ ರೂಪುರೇಖೆಗಳನ್ನು ವಿನ್ಯಾಸಗೊಳಿಸಿತ್ತು.

ಈ ಕೆಳಗೆ ನಮ್ಮ ಹಿಂದಿನ ವರ್ಷದ ಕಾರ್ಯಕ್ರಮಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ಶಿಕ್ಷಕರಿಗಾಗಿ

ಪ್ರಾಥಮಿಕ ಶಾಲಾ ಶಿಕ್ಷಕರ ವಿಷಯ ಜ್ಞಾನ ಹಾಗೂ ಕಲಿಕಾ ಕೌಶಲ್ಯಗಳನ್ನು ಹೆಚ್ಚಿಸಲು ಸಂವಾದಾತ್ಮಕ ಆನ್‌ಲೈನ್‌ ತರಬೇತಿ ಕಾರ್ಯಕ್ರಮ.
 

ಇನ್ನಷ್ಟು ತಿಳಿದುಕೊಳ್ಳಿ

ವಿದ್ಯಾರ್ಥಿಗಳಿಗಾಗಿ

ಕೋವಿಡ್ – 19 ರಿಂದಾಗಿ ಶಾಲೆಗಳು ಮುಚ್ಚಿದ್ದರೂ ಮನೆಯಲ್ಲೇ ವಿದ್ಯಾರ್ಥಿಗಳ ಮುಂದುವರಿದ ಕಲಿಕೆಗಾಗಿ, ರಾಮನಗರದಲ್ಲಿ ಅನುಭವಾತ್ಮಕ ಯೋಜನೆ ಆಧಾರಿತ ಪಠ್ಯ ಯೋಜನೆಗಳು.

ಇನ್ನಷ್ಟು ತಿಳಿದುಕೊಳ್ಳಿ
ಜಿಲ್ಲಾ ಶೈಕ್ಷಣಿಕ ಸಂವರ್ಧನಾ ಕಾರ್ಯಕ್ರಮ (ಡಿಇಪಿಟಿ)
 
ಭಾರತ ದೇಶದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಅಗಾಧವಾಗಿದ್ದು, ಲಕ್ಷಾಂತರ ಭಾಗಿದಾರರನ್ನು ಒಳಗೊಂಡಿದೆ. ಇಂತಹ ವ್ಯವಸ್ಥೆಯೊಳಗೆ  ಗಹನವಾದ ಮತ್ತು ಸುಸ್ಥಿರವಾದ ಸುಧಾರಣೆಗಳನ್ನು ತರುವುದು ಒಂದು ಜಟಿಲವಾದ ಕಾರ್ಯ. ಅಂತಹ ಸುಧಾರಣೆಗಳಿಗೆ ನಾಂದಿ ಹಾಡಲು ಎದುರಿಸಬೇಕಾದ ಸಂಕಷ್ಟಗಳು ಹಾಗೂ ಸವಾಲುಗಳನ್ನು ಡಾ. ಪ್ರಸನ್ನ ಕುಮಾರ್ ತಮ್ಮ ಈ ಲೇಖನದಲ್ಲಿ ವಿವರಿಸಿದ್ದಾರೆ.
ಜಿಲ್ಲಾ ಶೈಕ್ಷಣಿಕ ಸಂವರ್ಧನಾ ಕಾರ್ಯಕ್ರಮವು (DETP) ಶಿಕ್ಷಣ ವ್ಯವಸ್ಥೆಯಲ್ಲಿ ಆಳವಾದ ಮತ್ತು ಸುಸ್ಥಿರ ಗುಣಮಟ್ಟದ ಸುಧಾರಣೆಗಳನ್ನು ತರಲು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯ ಸಹಯೋಗದಲ್ಲಿ ಕೇರಿಂಗ್ ವಿಥ್ ಕಲರ್, ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಹಮ್ಮಿಕೊಂಡ ಒಂದು ಪ್ರಮುಖ ಉಪಕ್ರಮವಾಗಿದೆ.
ಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
   ಹೆಮ್ಮೆ ಮತ್ತು ಸಂಭ್ರಮದ ಕ್ಷಣಗಳು
ಡಿಎಸ್ಇಆರ್‌ಟಿಯಿಂದ ಮಾನ್ಯತೆ!

 
ಕರ್ನಾಟಕ ಸರ್ಕಾರದ ಪಠ್ಯಕ್ರಮ ಅಂಗೀಕಾರ ಪ್ರಾಧಿಕಾರವಾದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್‌ಇಆರ್‌ಟಿ)ಯು ಕೇರಿಂಗ್ ವಿಥ್ ಕಲರ್‌ ಸಂಸ್ಥೆಯ ಅನುಭವಾತ್ಮಕ ಯೋಜನೆಗಳನ್ನು ಅಂಗೀಕರಿಸಿದೆ.
ದೀಕ್ಷಾ(ಡಿಜಿಟಲ್ ಇನ್‌ಫ್ರಾಸ್ಟಕ್ಚರ್ ಫಾರ್ ನಾಲೆಡ್ಜ್ ಶೇರಿಂಗ್) ವೇದಿಕೆಯಲ್ಲಿ 4 ರಿಂದ 7ನೇ ತರಗತಿಗಳ, ವಿಜ್ಞಾನ, ಗಣಿತ ಹಾಗೂ ಇಂಗ್ಲಿಷ್ ವಿಷಯಗಳ, 600ಕ್ಕೂ ಅಧಿಕ ಅನುಭವಾತ್ಮಕ ಕಲಿಕಾ ಪಠ್ಯ ಯೋಜನೆಗಳು ಲಭ್ಯವಿದ್ದು, ಇವನ್ನು ಶಿಕ್ಷಕರು ಉಚಿತವಾಗಿ ಬಳಸಿಕೊಳ್ಳಬಹುದು.
ತುಮಕೂರಿನಲ್ಲಿ ಶಿಕ್ಷಣ ಸುಧಾರಣೆಗಾಗಿ ಒಪ್ಪಂದ

  
ಕೇರಿಂಗ್ ವಿಥ್ ಕಲರ್ ಸಂಸ್ಥೆಯು ತುಮಕೂರು ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲಾ ಮಟ್ಟದಲ್ಲಿ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಹಾಗೂ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗಾಗಿ ಜಿಲ್ಲಾ ಶೈಕ್ಷಣಿಕ ಸಂವರ್ಧನಾ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸುವುದಕ್ಕಾಗಿ ಶಿಕ್ಷಣ ಇಲಾಖೆಯೊಂದಿಗೆ ಮೂರು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ. 
 ಶಿಕ್ಷಕರ ಚಾವಡಿ  
ನಾವು ಪ್ರಭಾವಿತರಾಗಿದ್ದೇವೆ…...

ಶ್ರೀಮತಿ ಸುಮಾ ಹಾಗೂ ಶ್ರೀಮತಿ ಪ್ರಭಾವತಿ ತುಮಕೂರು ಜಿಲ್ಲೆಯ ಸಮರ್ಪಣ ಭಾವದ ಶಿಕ್ಷಕಿಯರಾಗಿದ್ದು, ನಮ್ಮ  ಅನುಭವಾತ್ಮಕ ಆನ್‌ಲೈನ್ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೇರಿಂಗ್ ವಿಥ್ ಕಲರ್ ತಂಡದ ಸಮರ್ಪಣ ಮನೋಭಾವದಿಂದ ತಾವು ಪ್ರೇರೇಪಣೆ ಪಡೆದಿರುವುದಾಗಿ ಈ ಶಿಕ್ಷಕಿಯರು ತಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಾಗ, ನಮ್ಮ ಮನ ತುಂಬಿ ಬಂದಿತು ಹಾಗೂ ಇದರಿಂದ ನಾವು ಸ್ಪೂರ್ತಿ ಪಡೆದೆವು.

ಯೋಜನಾಧರಿತ ಕಲಿಕಾ ಕಾರ್ಯಕ್ರಮದಲ್ಲಿ, ಅವಶ್ಯಕತೆಯ ಅನುಸಾರವಾಗಿ ಮಾಡ್ಯುಲ್‌ಗಳ ಮಾದರಿಗಳನ್ನು ಮುದ್ರಿಸಿ ಮಕ್ಕಳಿಗೆ ಹಂಚುವುದು ಸವಾಲು ಎನ್ನುವುದನ್ನುಅರಿತುಕೊಂಡ ಈ ಇಬ್ಬರು ಶಿಕ್ಷಕಿಯರು ಮಕ್ಕಳ ಕಲಿಕೆಗೆ ತಡೆ ಉಂಟಾಗಬಾರದೆಂದು ನಿರ್ಧರಿಸಿ ಇಬ್ಬರು ಹಣ ಹಾಕಿ ಪ್ರಿಂಟರ್‌ ಒಂದನ್ನು ಖರೀದಿಸಿದರು. ಇದು ಅಸಾಧಾರಣ ಪ್ರಯತ್ನ ಎಂದು ಅನಿಸುವುದಿಲ್ಲವೆ!

ಈಗಲೂ ಕೂಡ ಈ ಇಬ್ಬರು ಶಿಕ್ಷಕಿಯರು ಎಲ್ಲ ಶೈಕ್ಷಣಿಕ ಸಂಪನ್ಮೂಲಗಳ ಮುದ್ರಿತ ಪ್ರತಿಗಳನ್ನು ಮಕ್ಕಳಿಗೆ ಹಂಚುತ್ತಿದ್ದಾರೆ. ಇದರಿಂದ ಕೋವಿಡ್ ಸಮಯದಲ್ಲೂ ಎಳೆಯ ಮನಸ್ಸುಗಳು ಯಾವುದೇ ಅಡೆತಡೆಯಿಲ್ಲದೆ ಕಲಿಕೆಯನ್ನು ಮುಂದುವರಿಸುವುದು ಸಾಧ್ಯವಾಗಿದೆ.

    

        

 
 ಹೇಗೆ ಎಂದು ಅರಿಯಿರಿ
  ಈ ವಿಭಾಗದಲ್ಲಿ ಕೆಲವು ಸಾಮಾನ್ಯ ಹಾಗೂ ಕೆಲವು ಸಾಮಾನ್ಯವಲ್ಲದ ಪರಿಕಲ್ಪನೆಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಇವು ನಮ್ಮೆಲ್ಲರನ್ನೂ ಆಗಾಗ ಗೊಂದಲಕ್ಕೀಡು ಮಾಡುವಂತವೆ ಆಗಿವೆ.
ಇಂಗ್ಲಿಷ್ ಬರೆಯುವಾಗ ನಾವು ಮಾಡುವ ಅತ್ಯಂತ ಸಾಮಾನ್ಯ ತಪ್ಪುಗಳಲ್ಲಿ  ಒಂದನ್ನು ನೋಡೋಣ.
 
"Your' ಎನ್ನುವುದು "You' ಎಂಬುದರ ಸರ್ವನಾಮವಾಗಿದ್ದು, ಸಾಮಾನ್ಯವಾಗಿ ಅದರೊಟ್ಟಿಗೆ ನಾಮವಾಚಕವೊಂದು ಬರಲಿದೆ. "you're' ಎನ್ನುವುದು you ಮತ್ತು are ಗಳನ್ನು ಒಳಗೊಂಡ ಪದ.
 
ಉದ್ದರಣ ಚಿಹ್ನೆಯು ಅಲ್ಲಿ ಇರದ ಅಕ್ಷರ "a'ನ್ನು ಪ್ರತಿನಿಧಿಸುತ್ತದೆ.
 
ನಿಮ್ಮನ್ನು ಪರೀಕ್ಷಿಸಿಕೊಳ್ಳಿ:
 
  1. a) You’re here! Welcome!
      b) Your here ! Welcome!

ನಮ್ಮ ಪಯಣ ಹಾಗೂ ಕಾರ್ಯಸಾಧನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಆಲಿಸಲು ನಾವು ಇಚ್ಛಿಸುತ್ತೇವೆ.
ನಮಗೆ ಬರೆಯಿರಿ.

   newsletter@caringwithcolour.org
  +91-80 4565 6888
 #573, 17th Cross Road, Binnamangala, 
        Hoysala Nagar, Indiranagar, Bengaluru,
Karnataka-560038
YouTube
LinkedIn
Unsubscribe


This email was sent to *|EMAIL|*
why did I get this?    unsubscribe from this list    update subscription preferences
*|LIST:ADDRESSLINE|*