ಕೇರಿಂಗ್ ವಿತ್ ಕಲರ್‌ ಟೀಮ್ ನಿಂದ ಶುಭಾಶಯಗಳು!

Our Imprints ನ ಎರಡನೇ ಆವೃತ್ತಿಯೊಂದಿಗೆ ನಾವು ಹಿಂತಿರುಗಿದ್ದೇವೆ. ಕಳೆದೆರಡು ತಿಂಗಳುಗಳು ರೋಚಕವಾಗಿದ್ದವು. ಶಿಕ್ಷಕರೊಂದಿಗೆ ನಮ್ಮ ಚಟುವಟಿಕೆಗಳು ಮಧುಗಿರಿಯಲ್ಲಿ 2000+ ಶಿಕ್ಷಕರೊಂದಿಗೆ ಆನ್‌ಲೈನ್ ಅನುಭವಾತ್ಮಕ ಶಿಕ್ಷಕರ ತರಬೇತಿ ಕಾರ್ಯಕ್ರಮದೊಂದಿಗೆ  ಮುಂದುವರೆದಿವೆ. ಇದರ ಜೊತೆ ಜೊತೆಗೇ ನಮ್ಮ ತಂಡವು ವಂದು ಅನನ್ಯ ಪ್ರಯತ್ನದಡಿ  ಉರ್ದು ಮಾಧ್ಯಮ ಶಾಲೆಗಳ ಶಿಕ್ಷಕರಿಗಾಗಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇದರಲ್ಲಿ ಮೂರು ಶೈಕ್ಷಣಿಕ ಜಿಲ್ಲೆಗಳು ಭಾಗಿಯಾಗಿವೆ.

ನಮ್ಮ ಸಂಸ್ಥೆಯ ತಂತ್ರಜ್ಞಾನ ಪ್ಲಾಟ್‌ಫಾರ್ಮ್‌ನ ಆಂಡ್ರಾಯ್ಡ್ ಅಪ್ಲಿಕೇಶನ್, ಟೀಚೋಪಿಯಾವನ್ನು (Teachopia ) ನಮ್ಮ ಶಿಕ್ಷಣ ಸಚಿವರಾದ ಬಿ ಸಿ ನಾಗೇಶ್ ಅವರು ಬಿಡುಗಡೆ ಮಾಡಿ, ಶಿಕ್ಷಕರಿಗೆ ಅರ್ಪಿಸಿದರು. ನಮಗಿದೊಂದು ಮೈಲಿಗಲ್ಲು. 
ಶಿಕ್ಷಕರು ತಮ್ಮ ತರಗತಿಗಳನ್ನು ಅನುಭವಾತ್ಮಕ ಕಲಿಕೆಯ ತಾಣಗಳಾಗಿ ಪರಿವರ್ತಿಸಲು ಸಹಾಯ ಮಾಡಲು ಟೆಕೋಪಿಯಾವನ್ನು ವಿನ್ಯಾಸಗೊಳಿಸಲಾಗಿದೆ.

ಅನುಭವಾತ್ಮಕ ಕಲಿಕೆ ಎಂದರೆ, ಕಲಿಯುವವರು ಯೋಚಿಸುವ ಮತ್ತು ಚಿಂತಿಸುವ ಮುಲಕ ತಮ್ಮ ಜ್ಞಾನವನ್ನು ಸ್ವಂತವಾಗಿ ಕಟ್ಟಿಕೊಳ್ಳುವ ವಿಧಾನವಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF) 2005 ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಶಾಲಾ ಮಕ್ಕಳಲ್ಲಿ  ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಅನುಭವಾತ್ಮಕ ಕಲಿಕೆಯು ಪ್ರಮುಖ ಸಾಧನವಾಗಿದೆ ಎಂದು ವತ್ತಿ ಹೇಳುತ್ತದೆ.

Our Imprints ನ ಈ ಆವೃತ್ತಿಯಲ್ಲಿ, ಅನುಭವಾತ್ಮಕ ಕಲಿಕೆಯ ಅದ್ಭುತ ಜಗತ್ತನ್ನು ಅನ್ವೇಷಿಸೋಣ ಮತ್ತು ಶಿಕ್ಷಕರಾಗಿ ನೀವು  ನಿಮ್ಮ ತರಗತಿಗಳನ್ನು ಅನುಭವಾತ್ಮಕ ಕಲಿಕೆಯ ತಾಣಗಳಾಗಿ ಪರಿವರ್ತಿಸಲು Teachopia ಪ್ಲಾಟ್‌ಫಾರ್ಮ್ ಅನ್ನು ಹೇಗೆ ಬಳಸಬಹುದೆಂದು ಅನ್ವೇಷಿಸೋಣ.

ಸಾಂಪ್ರದಾಯಿಕ ತರಗತಿ ಮತ್ತು ಅನುಭವಾತ್ಮಕ ತರಗತಿ

ಸಾಂಪ್ರದಾಯಿಕ ತರಗತಿ: ಆನೆ ಎಂದರೇನು ಎಂದು ಶಿಕ್ಷಕರು ಹೇಳುತ್ತಾರೆ.
ಅನುಭವಾತ್ಮಕ ತರಗತಿ: ಮಕ್ಕಳು ಆನೆಯನ್ನು ಅನುಭವಿಸುತ್ತಾರೆ.
...ಮತ್ತು ಆನೆ ಎಂದರೇನು ಎಂದು ತಮ್ಮದೇ ಆದ ಪರಿಕಲ್ಪನೆಯನ್ನು ರೂಪಿಸಿಕೊಳ್ಳುತ್ತಾರೆ.

ನಿಮ್ಮ ವಿದ್ಯಾರ್ಥಿಗಳು ಗಣಿತದ ಪರಿಮಳವನ್ನು ಆಸ್ವಾದಿಸುತ್ತಾರೆಯೇ?

- ರಾಜೀವ್  ಅನ್ನಲೂರು 

ಈ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ- ನೀವು 15 ನಿಮಿಷಗಳಲ್ಲಿ 10 ಹಾಡುಗಳನ್ನು ಕಲಿಯಬೇಕು ಮತ್ತು ಅವುಗಳ ಬಗ್ಗೆ 5 ಪ್ರಶ್ನೆಗಳಿಗೆ ಉತ್ತರಿಸಬೇಕು. ಹೀಗಿದ್ದಲ್ಲಿ, ಸಂಗೀತದ ಬಗ್ಗೆ ನಿಮಗೆ ಏನನಿಸಬಹುದು? ಸಂಗೀತವನ್ನು ಕಲಿಯಲು ಇದೊಂದು ಉತ್ತಮ ವಿಧಾನವೆಂದು ನೀವುಪರಿಗಣಿಸುತ್ತೀರಾ? ಈ ರೀತಿಯಲ್ಲಿ ನೀವು ಯಾರನ್ನಾದರೂ ಸಂಗೀತ ಕಲಿಯುವಂತೆ ಮಾಡಬಹುದೇ?
ನೀವು ಇದನ್ನು ಬೇರೆಲ್ಲಾದರೂ ಅನುಭವಿಸಿದ್ದು ನೆನಪಿದೆಯೇ? ಬಹುಶಃ ಶಾಲೆಯಲ್ಲಿ? ಯಾವ ವಿಷಯದಲ್ಲಿ ಈ ರೀತಿ ಅನುಭವವಾಗಿತ್ತು? ನೀವು ಗಣಿತ ಎಂದು ಉತ್ತರಿಸಿದಿರಾ? 
ಹಾಗಾದರೆ, ಹೆಚ್ಚಿನ ಜನರು ಗಣಿತವನ್ನು ಏಕೆ ಇಷ್ಟಪಡುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಲೇಖನವನ್ನು ಓದಿ.
ಪೂರ್ಣ ಲೇಖನವನ್ನು ಓದಿ
Teachopia ಈಗ ಎಲ್ಲರಿಗೂ ಲಭ್ಯ!
ಕೇರಿಂಗ್  ವಿಥ್  ಕಲರ್ ನ ಅನುಭವಾತ್ಮಕ ಕಲಿಕಾ ಅಪ್ಲಿಕೇಶನ್ ಆದ Teachopia ವು ನಿಮ್ಮ ತರಗತಿಯನ್ನು ಹೆಚ್ಚು ಮೋಜುದಾಯಕ ಮತ್ತು ಅನುಭವಾತ್ಮಕವನ್ನಾಗಿಸುತ್ತದೆ. 
Teachopia ಅಪ್ಲಿಕೇಶನ್ ಅನ್ನು ಅಕ್ಟೋಬರ್ 9 ರಂದು ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವರಾದ ಶ್ರೀ ಬಿ ಸಿ ನಾಗೇಶ್ ಅವರು ಉದ್ಘಾಟಿಸಿದರು.
 ಅಪ್ಲಿಕೇಶನ್ ಅನ್ನು ಇಲ್ಲಿ ಡೌನ್‌ಲೋಡ್ ಮಾಡಿ
Teachopia ಅಪ್ಲಿಕೇಶನ್ ಅನ್ನು ಇಲ್ಲಿ ಅನ್ವೇಷಿಸಿ
ಶಿಕ್ಷಕರ ಯುಟೋಪಿಯಾ: ಸಮಗ್ರ ಶೈಕ್ಷಣಿಕ ಪ್ರಪಂಚದತ್ತ ಒಂದು ಹೆಜ್ಜೆ
-ಗಂಧಾಲಿ ಸೇವಕ್ 

 ಟೀಚೋಪಿಯಾ (Teachopia) ವು ಶಿಕ್ಷಕರಿಗೆ ಗುಣಮಟ್ಟದ ಅನುಭವಾತ್ಮಕ ಬೋಧನಾ ವಿಷಯವನ್ನು ಒದಗಿಸುವ,  ಶಿಕ್ಷಕರ ತರಬೇತಿ ಕಾರ್ಯಕ್ರಮಗಳನ್ನು ಸುಗಮಗೊಳಿಸಲು  ತರಬೇತಿ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿರುವ ವಂದು ವೇದಿಕೆಯಾಗಿದೆ.
ಈ ಲೇಖನವು ಟೀಚೋಪಿಯಾ (Teachopia) ದ ಬಗ್ಗೆ ಹಾಗೂ ಅದು ಹೇಗೆ ಮಕ್ಕಳ ನಿರಂತರ ಕಲಿಕೆಯಲ್ಲಿ ತೊಡಗಿರುವ ಶಿಕ್ಷಕರಿಗೆ ಆಧಾರವಾಗುತ್ತದೆ ಎಂದು ಚರ್ಚಿಸುತ್ತದೆ.
ಪೂರ್ಣ ಲೇಖನವನ್ನು ಓದಿ
ನಮ್ಮ ಶೈಕ್ಷಣಿಕ ಕಾರ್ಯಗಳು
ನಾವೀನ್ಯವಾದ ವಿಷಯ ಸಂಪತ್ತು ಹಾಗೂ ಪ್ರೋಗ್ರಾಮ್ ವಿನ್ಯಾಸದೊಂದಿಗೆ ಶಿಕ್ಷಕರನ್ನು ಬಲವರ್ಧನೆ ಗೊಳಿಸುವದತ್ತ ಕೇರಿಂಗ್ ವಿಥ್ ಕಲರ್ ನ ಪಯಣವು ಮುಂದುವರೆದಿದೆ.
ಮಧುಗಿರಿ ಶಿಕ್ಷಕರ ತರಬೇತಿ ಕಾರ್ಯಕ್ರಮ
ಮಧುಗಿರಿಯ 2434 ಕಿರಿಯ ಪ್ರಾಥಮಿಕ ಶಿಕ್ಷಕರಿಗಾಗಿ, ಅವರ ವಿಷಯ ಸಂಪತ್ತನ್ನು ಹೆಚ್ಚಿಸಲು ಹಾಗು ಬೋಧನಾ ಕ್ರಮಗಳನ್ನು ಉತ್ತಮಗೊಳಿಸಿಕೊಳ್ಳಲು, ಇಂಗ್ಲಿಷ್, ವಿಜ್ಞಾನ ಮತ್ತು ಗಣಿತದಲ್ಲಿ ಆನ್ಲೈನ್ ಅನುಭವಾತ್ಮಕ ತರಬೇತಿಯು, ಮಧುಗಿರಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (DIET) ಸಹಭಾಗಿತ್ವದಲ್ಲಿ ಪೂರ್ಣಗೊಂಡಿತು.


 
ಶಿಕ್ಷಣ ಕಾರ್ಯಕಾರಿಗಳಿಗೆ ತರಬೇತಿ 
ರಾಮನಗರ ಬ್ಲಾಕ್ ನ CRP, BRP ಹಾಗೂ ECOಗಳು ತಮ್ಮ ತಮ್ಮ ಕ್ಲಸ್ಟರ್ ಗಳಲ್ಲಿ ಶಿಕ್ಷಕರೊಟ್ಟಿಗೆ ಸಭೆ ಹಾಗೂ ತರಬೇತಿಗಳನ್ನು ಸುಗಮವಾಗಿ ಹಮ್ಮಿಕೊಳ್ಳಲು Zoom ಮತ್ತು Google meet ಸಾಧನಗಳ ತಾಂತ್ರಿಕತೆಗಳ ಬಗ್ಗೆ Technology Orientation ಅನ್ನು ಹಮ್ಮಿಕೊಂಡ್ಡಿದ್ದೆವು.





ಉರ್ದು ಮಾಧ್ಯಮ ಶಾಲೆಗಳಿಗೆ ಶಿಕ್ಷಕರ ತರಬೇತಿ ಕಾರ್ಯಕ್ರಮ
ಉರ್ದು ಮಾಧ್ಯಮ ಶಾಲೆಗಳ ಶಿಕ್ಷಕರಿಗಾಗಿ ಉರ್ದು ಭಾಷೆಯಲ್ಲೇ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ನಡೆಸಲಾದ ವಿಶಿಷ್ಟ ವಿನ್ಯಾಸದ ಅನುಭವಾತ್ಮಕ ತರಬೇತಿಗಳಿಗೆ ಬರಮಾಡಿಕೊಂಡೆವು.


 
 Know-How
 ಈ ವಿಭಾಗದಲ್ಲಿ, ನಾವು ಕೆಲವು ಸಾಮಾನ್ಯ ಮತ್ತು ಸಾಮಾನ್ಯವಲ್ಲದ ಪರಿಕಲ್ಪನೆಗಳನ್ನು ಮತ್ತು ಆಸಕ್ತಿದಾಯಕ ಬೋಧನಾ ವಿಚಾರಗಳನ್ನು ಚರ್ಚಿಸುತ್ತೇವೆ.
ದೈನಂದಿನ ವಸ್ತುಗಳೊಂದಿಗೆ ಗಣಿತ ವಿನೋದ!
ವಿಚಾರಣೆ (Enquiry) ಮತ್ತು ಪರಿಶೋಧನೆಯು (Exploration) ಗಣಿತದ ಕಲಿಕೆಯನ್ನು ವಿನೋದಗೊಳಿಸುವಲ್ಲಿ ಪ್ರಮುಖ ಅಂಶಗಳಾಗಿವೆ.

ವಿದ್ಯಾರ್ಥಿಗಳು ಅನ್ವೇಷಿಸಬಹುದಾದ ಆಸಕ್ತಿದಾಯಕ ಗಣಿತದ ಆಟ ಇಲ್ಲಿದೆ.
ವಿವರಣೆ:
ಕ್ಯಾಲೆಂಡರ್‌ನಿಂದ ಒಂದು ತಿಂಗಳು ಆಯ್ಕೆ ಮಾಡಿಕೊಳ್ಳಿ. ಚಿತ್ರದಲ್ಲಿ ಕಾಣುವ 3x3 ಗ್ರಿಡ್ ಅನ್ನು ಯಾವುದೇ 3x3 ದಿನಾಂಕಗಳ ಕೋಶಗಳ ಮೇಲಿರಿಸಿ. ಖಾಲಿ ಕೋಶಗಳನ್ನು ಬಳಸಬೇಡಿ. 

ಕೇಂದ್ರ ಸಂಖ್ಯೆಯನ್ನು ಒಳಗೊಂಡಂತೆ ಸಮತಲ, ಲಂಬ ಮತ್ತು ಕರ್ಣೀಯ ದಿಕ್ಕುಗಳಲ್ಲಿ ಗುರುತಿಸಲಾದ ರೇಖೆಗಳನ್ನು ನಾವು ಸೇರಿಸಿದಾಗ, ಮೊತ್ತವು ಒಂದೇ ಆಗಿರುವುದನ್ನು ನಾವು ಗಮನಿಸುತ್ತೇವೆ

 
3 + 10 + 17 = 30
9 + 10 + 11 = 30
2 + 10 + 18 = 30
4 + 10 + 16 = 30

ಗಮನಿಸಿ: ಈ ನಿಯಮವು ಯಾವುದೇ ವರ್ಷ ಮತ್ತು ಯಾವುದೇ ತಿಂಗಳಿಗೂ ಅನ್ವಯಿಸುತ್ತದೆ. ಪ್ರಯತ್ನಿಸಿ, ಪರೀಕ್ಷಿಸಿ ಮತ್ತು ಇತರರೊಂದಿಗೆ ಪ್ರಯೋಗಿಸಿ ಮತ್ತು ಗಣಿತದ ವಿನೋದವನ್ನು ಆನಂದಿಸಿ!

ನಮ್ಮ ಪಯಣ  ಮತ್ತು ನಮ್ಮ ಕಥೆಗಳ ಕುರಿತು ನಿಮ್ಮ ಆಲೋಚನೆಗಳನ್ನು ಕೇಳಲು ಇಚ್ಚಿಸುತ್ತೇವೆ.
ನಮಗೆ ಇಲ್ಲಿ ಬರೆಯಿರಿ
  newsletter@caringwithcolour.org
 +91-80 4565 6888
  #573, 17th Cross Rd, Binnamangala,
Hoysala Nagar, Indiranagar, Bengaluru,
Karnataka 560038
YouTube
LinkedIn
Unsubscribe